ಅಡೆಲ್ ಗೆರೆಸ್ ಅವರು ಬಹಳ ಹೆಸರುವಾಸಿಯಾಗಿರುವ ಲೇಖಕಿಯರಲ್ಲಿ ಒಬ್ಬರಾಗಿದ್ದಾರೆ. ಅಡೆಲ್ ಅವರು ಮಕ್ಕಳಿಗೆ,ಯುವಕರಿಗೆ ಹಾಗು ವಯಸ್ಕರಿಗೆ ಹಲವಾರು ಕೃತಿಗಳನ್ನು ಮತ್ತು ಕತೆಗಳನ್ನು ಬರೆದಿದ್ದಾರೆ. ಇವರ ಗಂಡ ನಾರ್ಮನ್ ಗೆರೆಸ್ ಹಾಗೂ ಮಗಳು ಸೋಫಿ ಹಾನಾ. ಗಂಡ ಮಾರ್ಕ್ಸ್ವಾದಿಯಾಗಿದ್ದರು ಹಾಗು ಅವರ ಮಗಳು ಸೋಫಿ ಮ್ಯಾಂಚೆಸ್ಟರಿನಲ್ಲಿ ಹುಟ್ಟಿ-ಬೆಳೆದು,ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದು ಅನೇಕ ಕತೆಗಳನ್ನು ಹಾಗು ಕವಿತೆಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ. ಅವರ ಮೊದಲ ಕೃತಿ "ದಿ ಹೀರೋ ಅಂಡ್ ದಿ ಗರ್ಲ್ ನೆಕ್ಸ್ಟ್ ಡೋರ್" ಬಹಳ ಜನಪ್ರಿಯವಾಗಿದೆ.ಅವರ ಕಾದಂಬರಿ " ದ ಪಾಯಿ೦ಟ್ ಆಫ್ ರೆಸ್ಕ್ಯು" ನಾಟಕವಾಗಿ ದೂರದರ್ಶನದಲ್ಲಿ ಪ್ರಸಾರ ಮಾಡಿ ಬಹಳಷ್ಟು ಪ್ರತಿಕ್ರಿಯೆ ಹಾಗು ಮೆಚ್ಚುಗೆ ಗಳಿಸಿತು. == ಜೀವನ == ಅಡೆಲ್ ಅವರು ೧೫ ಮಾರ್ಚ್ ೧೯೪೪ರಲ್ಲಿ ಜೆರುಸಲೆಮ್,ಪಾಲೆಸ್ಟೈನಲ್ಲಿ ಜನಿಸಿದರು. ಇವರ ತಂದೆ ಲಾರೆನ್ಸ್ ಡೇವಿಡ್,ಬ್ರಿಟಿಷ್ರರವರ ವಸಾಹತು ಸೇವೆಯಲ್ಲಿದ್ದರಿಂದ ಅಡೆಲ್ ಅವರು ವಿವಿಧ ಸ್ಥಳಗಳಲ್ಲಿ/ದೇಶಗಳಲ್ಲಿ ಅವರ ಬಾಲ್ಯ ಜೀವನವನ್ನು ಕಳೆದರು. ನೈಜೀರಿಯಾ,ಸೈಪ್ರಸ್, ಟಾಂಜಾನಿಯಾ, ಗ್ಯಾಂಬಿಯಾ ಹಾಗು ಮುಂತಾದ ದೇಶಗಳಲ್ಲಿ ಕೆಲವು ವರ್ಷಗಳನ್ನು ಕಳೆದರು. ಬ್ರಿಟೆನಲ್ಲಿರುವ ರೋಡಿಯನ್ ಸ್ಕೂಲ್ ನಲ್ಲಿ ಶಿಕ್ಷಣವನ್ನು ಪಡೆದು, ನಂತರ ಸೇಂಟ್ ಹಿಲ್ಡಾಸ್ ಕಾಲೇಜಿನಿಂದ ಆಧುನಿಕ ಭಾಷೆಗಳಲ್ಲಿ ಪದವಿಯನ್ನು ಪಡೆದರು. ಅಡೆಲ್ ಅವರು ನಾಟಕಗಳಲ್ಲಿ ಹಾಗು ಸಂಗೀತದಲ್ಲಿ ಖ್ಯಾತರಾಗಿದ್ದರೂ ಅವರ ಆಸಕ್ತಿ ಕತೆ-ಕವಿತೆಗಳ ಬರೆವಣಿಗೆಯ ಕಡೆ ಸೆಳೆಯಿತು. ಅಡೆಲ್ ಅವರು ಪ್ರಸ್ತುತವಾಗಿ ಮ್ಯಾಂಚೆಸ್ಟರಿನಲ್ಲಿ ಗೆರೆಸ್ ಅವರ ಜೊತೆ ನೆಲೆಸಿದ್ದಾರೆ. == ಕೃತಿಗಳು == ಅಡೆಲ್ ಗೆರೆಸ್ ಅವರ ಮೊದಲನೆಯ ಕೃತಿ "ಟಿ ಅಟ್ ಮಿಸೆಸ್ ಮಾಂಡರ್ಬಿಸ್" ೧೯೭೬ರಲ್ಲಿ ಪ್ರಕಟಿಸಲಾಯಿತು.ಅವರ ಮೊದಲ ಕಾದಂಬರಿ " ದ ಗರ್ಲ್ಸ್ ಇನ್ ದ ವೆಲ್ವೆಟ್ ಫ್ರೇಮ್ " ಎಂಬುದಕ್ಕೆ ಬಹಳ ಪ್ರತಿಕ್ರಿಯೆ ಸಿಕ್ಕಿತು.ಗೆರೆಸ್ ಅವರು ೯೫ಕ್ಕಿ೦ತ ಹೆಚ್ಚು ಕೃತಿಗಳನ್ನು ಬರೆದು ಖ್ಯಾತಗೊಂಡರು. ಅವರ ಬಹಳ ಪ್ರಸಿದ್ದವಾದ ಕೃತಿಗಳಲ್ಲಿ ಟ್ರಾಯ್,ಇಥಕ,ಹ್ಯಾಪಿ ಎವರ್ ಆಫ್ಟರ್,ಸೈಲೆಂಟ್ ಸ್ನೋ, ಸೀಕ್ರೆಟ್ ಸ್ನೋ, ಎ ಎ ಥೌಸಂಡ್ ಯಾರ್ಡ್ಸ್ ಆಫ್ ಸೀ ಬಹಳ ಪ್ರಮುಖವಾಗಿದೆ. ಫೇಸಿ೦ಗ್ ಲೈಟ್,ಹೆಸ್ಟರ್ಸ್ ಸ್ಟೋರಿ, ಮೇಡ್ ಇನ್ ಹೆವನ್, ಮತ್ತು ಎ ಹಿಡನ್ ಲೈಫ್ ಯುವಜನಾಂಗದಲ್ಲಿ ಜನಪ್ರಿಯವಾಗಿದೆ. == ಪ್ರಶಸ್ತಿಗಳು == ಯುನೈಟೆಡ್ ಸ್ಟೇಟ್ಸಿನಲ್ಲಿ ಗೆರೆಸ್ ಅವರಿಗೆ ಎರಡು ಉನ್ನತವಾದ ಪ್ರಶಸ್ತಿಗಳು ದೊರೆಕಿದೆ. ೧೯೯೧ರಲ್ಲಿ ಮೈ ಗ್ರಾಂಡ್ ಸ್ಟೊರಿಸ್ ಎಂಬುದಕ್ಕೆ ಸಿಡ್ನಿ ಟೇಲರ್ ಬುಕ್ ಪ್ರಶಸ್ತಿ ಮತ್ತು ೧೯೯೪ರಲ್ಲಿ ಗೊಲ್ಡನ್ ವಿಂಡೋಸ್ ಕೃತಿಗಾಗಿ ನ್ಯಾಷನಲ್ ಜ್ಯುವಿಶ್ ಬುಕ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದಲ್ಲದೆ,ಅಡೆಲ್ ಗೆರೆಸ್ ಅವರ ಕವಿತೆಗಳಿಗೂ ಹಾಗು ಕಾದಂಬರಿಗಳಿಗೂ ಹಲವಾರು ಪ್ರಶಸ್ತಿಗಳು ನೀಡಲಾಗಿದೆ. == ಉಲ್ಲೇಖಗಳು ==